ಪ್ರಶಸ್ತಿ ವಿಜೇತರು..

ಪ್ರಶಸ್ತಿ ವಿಜೇತ ಗೌರವಾನ್ವಿತರ ಭಾವಚಿತ್ರ ಮತ್ತು ಸವಿವರಗಳನ್ನು ಇಲ್ಲಿ ಪ್ರಕಟಿಸಲಾಗುವುದು.

ಸಂಪಾದಕರು/ವ್ಯವಸ್ಥಾಪಕರು,
ಇದುಕನ್ನಡ.ಕಾಂ
ಬೆಂಗಳೂರು.

1 Comment

Filed under ಪ್ರಶಸ್ತಿ ವಿಜೇತರು

ವೀರಸೇವಾ ಪುರುಷ..

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗೆ  ರೂ. ೫೦೦೦/-ಕ್ಕೂ ಮೇಲ್ಪಟ್ಟು ದೇಣಿಗೆ ನೀಡಿದವರ ಭಾವಚಿತ್ರ ಮತ್ತು ವಿವರಗಳು.

Leave a Comment

Filed under ವೀರಸೇವಾ ಪುರುಷ

ವೀರಸೇವಾ ವನಿತೆ..

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗೆ  ರೂ. ೫೦೦೦/-ಕ್ಕೂ ಮೇಲ್ಪಟ್ಟು ದೇಣಿಗೆ ನೀಡಿದವರ ಭಾವಚಿತ್ರ ಮತ್ತು ವಿವರಗಳು.

Leave a Comment

Filed under ವೀರಸೇವಾ ವನಿತೆ

ಸಹಕರಿಸಿ..

 woch.gif                        child.jpg

ಗೌರವಾನ್ವಿತರೇ,

ಇದುಕನ್ನಡ.ಕಾಂ ಇ-ಪತ್ರಿಕೆಯು “ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆ (ರಿ)” ಯೊಂದನ್ನು ಜಾರಿಗೆ ತಂದಿದ್ದು ಇದರಲ್ಲಿ ಬಡ ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿಯನ್ನು ಅಂದರೆ, ಹೊಲಿಗೆ ತರಬೇತಿ, ಮೇಣದಬತ್ತಿ ತಯಾರಿಸುವಿಕೆ, ಮೇಕಪ್ ತರಬೇತಿ, ಮೆಹಂದಿ ತರಬೇತಿ, ಚಿತ್ರಕಲಾ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಇಂಗ್ಲೀಷ್ ಭಾಷಾ ತರಬೇತಿ, ಉಚಿತ ಕಂಪ್ಯೂಟರ್ ತರಬೇತಿಯನ್ನು ಮತ್ತು ಬಡ ಮಕ್ಕಳ ಕಲ್ಯಾಣಕ್ಕಾಗಿ, ಉಚಿತ ಶಿಕ್ಷಣ, ಉಚಿತ ವಸ್ತ್ರ, ಉಚಿತ ಊಟದ ವ್ಯವಸ್ಥೆಯನ್ನು ಹಮ್ಮಿಕೊಂಡಿದ್ದು ಈ ಒಂದು ಭಾರೀ ಯೋಜನೆಗೆ ಸಮಾಜದ ಎಲ್ಲಾ ವರ್ಗದ ಗಣ್ಯರಿಂದ ಇದುಕನ್ನಡ.ಕಾಂ ಸಹಾಯ-ಸಹಕಾರಗಳನ್ನು ಬಯಸಿದ್ದು ಸಹೃದಯರಾದ ತಾವು ತಮ್ಮ ಕೈಲಾದ ಸಹಾಯವನ್ನು ದೇಣಿಗೆ ಮೂಲಕ ಮಾಡಿ ಬಡ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ಕೆ ಚಾಲನೆ ನೀಡಬೇಕಾಗಿ ಈ ಮೂಲಕ ಅಪೇಕ್ಷಿಸುತ್ತೇವೆ.

ತಮ್ಮ ದೇಣಿಗೆಗಳನ್ನು “ಇದುಕನ್ನಡ.ಕಾಂ, ಬೆಂಗಳೂರು” ಈ ಹೆಸರಲ್ಲಿನ ಡಿ.ಡಿ. ಅಥವಾ ಚೆಕ್ ನೊಂದಿಗೆ ಕಳುಹಿಸಬಹುದು. ಅಧ್ಯಕ್ಷರನ್ನು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: ೯೯೮೦೩-೬೧೯೫೦.

ಕೃತಜ್ಞತೆಗಳೊಂದಿಗೆ,

ಅಧ್ಯಕ್ಷರು,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆ
ಇದುಕನ್ನಡ.ಕಾಂ
ಬೆಂಗಳೂರು-೮೫.

5 Comments

Filed under ಇತಿಹಾಸದ ನೆನಪಲ್ಲಿ.., ಕವನಗಳು, ಚುಟುಕಗಳು/ಹಾಸ್ಯಗಳು, ನಿನಗಾಗಿ.., ಬರಹಗಳು/ಲೇಖನಗಳು, ಬಹಿರಂಗ ಪತ್ರ, ವ್ಯಂಗ್ಯಚಿತ್ರಗಳು, ಸಂಗೀತ/ವೀಡೀಯೊ, ಸಾಹಿತ್ಯ/ಕಥೆ/ಕಾದಂಬರಿ

ನಿಮಗನಿಸಿದ್ದನ್ನು ಆಯಾ ಕಾಲಂ ನಲ್ಲಿ ಬರೆಯಿರಿ..!

abt_karnataka_img.jpg

ಬರಹದಲ್ಲಿ ಬರೆದು ಅದನ್ನು ಕಮೆಂಟ್ಸ್ ನಲ್ಲಿ ತುಂಬಿ ನಿಮ್ಮ ಹೆಸರು, ಇ-ಮೇಲ್ ಮತ್ತಿತರ ಮಾಹಿತಿಗಳೊಂದಿಗೆ ಆಯಾ ಕಾಲಂ ನಲ್ಲಿ ತುಂಬಿರಿ..! ಈಗ ನಿಮ್ಮ ವಿಶ್ವ ಕನ್ನಡ ಬ್ಲಾಗ್ ರೆಡಿ..!!

6 Comments

Filed under ಇತಿಹಾಸದ ನೆನಪಲ್ಲಿ.., ಕವನಗಳು, ಚುಟುಕಗಳು/ಹಾಸ್ಯಗಳು, ನಿನಗಾಗಿ.., ಬರಹಗಳು/ಲೇಖನಗಳು, ಬಹಿರಂಗ ಪತ್ರ, ವ್ಯಂಗ್ಯಚಿತ್ರಗಳು, ಸಂಗೀತ/ವೀಡೀಯೊ, ಸಾಹಿತ್ಯ/ಕಥೆ/ಕಾದಂಬರಿ

ಬರೆಯಿರಿ..ಇದುಕನ್ನಡ.ಕಾಂ ಬ್ಲಾಗ್ಸ್ ನಲ್ಲಿ..

ಕಥೆ, ಕವನ, ಹಾಸ್ಯ, ವಿಡಂಭನೆ, ಚುಟುಕು, ಕಾದಂಬರಿ, ಲೇವಡಿ, ಇತ್ಯಾದಿಗಳನ್ನು, ನಿಮಗನಿಸಿದ್ದನ್ನು ಬರೆಯಿರಿ. ಇದುಕನ್ನಡ.ಕಾಂ ಬ್ಲಾಗ್ಸ್ ನಿಮಗಾಗಿ ಪರಿಚಯಿಸುತ್ತಿದೆ ಬ್ಲಾಗ್ಸ್!

Leave a Comment

Filed under ಚುಟುಕಗಳು/ಹಾಸ್ಯಗಳು, ಬರಹಗಳು/ಲೇಖನಗಳು, ಬಹಿರಂಗ ಪತ್ರ, ವ್ಯಂಗ್ಯಚಿತ್ರಗಳು, ಸಂಗೀತ/ವೀಡೀಯೊ

ಬರೆಯಿರಿ..

ಕಥೆ, ಕವನ, ಹಾಸ್ಯ, ವಿಡಂಭನೆ, ಚುಟುಕು, ಕಾದಂಬರಿ, ಲೇವಡಿ, ಇತ್ಯಾದಿಗಳನ್ನು, ನಿಮಗನಿಸಿದ್ದನ್ನು ಬರೆಯಿರಿ. ಇದುಕನ್ನಡ.ಕಾಂ ಬ್ಲಾಗ್ಸ್ ನಿಮಗಾಗಿ ಪರಿಚಯಿಸುತ್ತಿದೆ ಬ್ಲಾಗ್ಸ್!

8 Comments

Filed under ಇತಿಹಾಸದ ನೆನಪಲ್ಲಿ..

ನಿಲುವು..

ನೀ ಹೇಗಿರುವೆ ಎಂದು  ಕಳವಳ
ನನಗೆ ಕೊಮಲೆ
ನೀ ಬಾ ಎಂದಾಗ ನಾ ಬರುವೆ
ಎಲ್ಲ ಕಾನನ ಹಾರಿ
ಸಂಬಂದಗಳ ಸಂಕೊಲೆಗಳ
ಮೀರಿ
ಎಲ್ಲ ಕವಚಗಳ ತೂರಿ
ಮಾಡ ಬರುವೆ ನಿನಗೂ
ಬರಲು ದಾರಿ
ನಿನಗೆ ಹಾರಲು-ತೂರಲು
ಮೀರಲು
ಮನಸಿದ್ದಲ್ಲಿ ಮುಟ್ಟಬಹುದು
ನಮ್ಮಯ ಗುರಿ
ಇಲ್ಲವಾದಲ್ಲಿ ನೀ ಈಗಲೇ ಹಿಂದೆಸರಿ
ಪಡದಿರು ಕಂಡು ನಾಳೆ ಹೊಟ್ಟೆ ಉರಿ
ನಾ ಹೊರಡುವೆ ಹಿಡಿದು ನನ್ನ ದಾರಿ
ಸೇರುವತನಕ ನನ್ನ ಗುರಿ
ಹಿಂತಿರುಗಿ ನೊಡಲಾರೆ ಸಾರಿ
ನಿನಗಿರದು ನನ್ನೊಂದಿಗಿಡಲು ಹೆಜ್ಜೆಗೆ ದಾರಿ

- ಕೃಷ್ಣಮೂರ್ತಿ ಅಜ್ಜಹಳ್ಳಿ, ಬೆಂ-೧೯

1 Comment

Filed under ಕವನಗಳು

ಅಳಿಯದ ನೆನಪಾದೆ..

ನನ್ನ ನಾನೇ ಮರೆತಿದ್ದೆ ನಲ್ಲೆ
ನಿನ್ನ ಒಲವ ಅಮಲಲ್ಲಿ
ಎಲ್ಲ ಮರೆತು ಮರೆಯಾದಾಗ
ನೀನು
ನಾನೇಕೆ ವ್ಯಥೆ ಪಡಬೇಕು ಇಲ್ಲಿ
ನಿನಗೆ ಶಾಶ್ವತ ಪೂಜೆ ನನ್ನ
rrvarmashantanusatyavati.jpgಹೃದಯ ದೇಗುಲದಲ್ಲಿ
ಆದರೆ ನಿನ್ನ ಆಹ್ವಾನವಿನ್ನಿಲ್ಲ
ಈ ನನ್ನ ಬದುಕಿನಲ್ಲಿ
ಎಲ್ಲಕೂ ನೀನೆ ಕಲ್ಪವಲ್ಲಿ
ತೇಲಿಸಿದೆ ಮುಳುಗಿಸಿದೆ
ನಿನ್ನ ತೇಲು ಮುಳುಗಾಟದಲ್ಲಿ
ನಾ ಮಜ್ಜನದ ಮನುಜನಾದೆ
ನನ್ನ ತನವ ಅರಿತವನಾದೆ
ನನ್ನವರಿಗೆ ಬೇಕಾದವನಾದೆ
ನಂಬಿಕೆಗೆ ಸನಿಹವಾದೆನೇ ವಿನಃ
ನಿನಗೆ ಮಾತ್ರ ಬೇಡದವನಾದೆ
ನೀಮಾತ್ರ ನನಗೆ ಅಳಿಯದ ನೆನಪಾದೆ

- ಕೃಷ್ಣಮೂರ್ತಿ ಅಜ್ಜಹಳ್ಳಿ, ಬೆಂ -೧೯

1 Comment

Filed under ಕವನಗಳು

ಗಣಪತಿ ಸ್ತುತಿ

ganesha22.jpg 

ಬಾರೋ ಮುದ್ದು ಗಣಪ
ಬಾರಯ್ಯ ಎದ್ದು ಗಣಪ ಆ …ಆ…ಆ..
ಬಾ ಬಾರೋ ಸಿದ್ದಿ ಗಣಪ “ಪಲ್ಲವಿ”

ಬಾಲಕರೆಲ್ಲರು ಲೀಲೆಯಿಂದಲಿ ಭಜಿಪರು ನಿನ್ನನು
ಹಚ್ಚ ಹಸುರಿನ ಗರಿಕೆ ಪಚ್ಚಬಾಳೆಯಹಣ್ಣು ನೆಚ್ಚಿನ ಕಡುಬು “”ಬಾರೋ”

ಪಾಪ ವಿನಾಷನೆ ಪಾರ್ವತಿ ಕುವರನೆ
ಪಾಪವ ಹರಿಸೋ ಪುರುಷೋತ್ತಮನೆ “ಬಾರೋ”

ಮಲ್ಲೆ ಮಲ್ಲಿಗೆ ಮಾಲೆ ತಂದು ನಿಂತಿಹಳು ಈ ಬಾಲೆ
ಮೂಷಿಕ ವಾಹನ ಕರುಣಿಸು ಈಗಲೆ “ಬಾರೋ”

ಆನೆಯ ಮೊಗದವನೆ ಅಂಬಾಪ್ರಿಯಸುತನೆ
ಅಸುಳೆಯ ಕಾಯೊ ಶ್ರೀ ಗಜಮುಖನೆ “ಬಾರೋ”

ಆದಿಪೂಜಿತ ನೀನೆ ಆದ್ಯಂತ ರಹಿತನೆ
ಆನಂದ ಪ್ರಿಯನೆ ಅಕ್ಷರ ವಿದಾತನೆ “ಬಾರೋ”

ವಿಜಯ ವಿನಾಯಕ ವಾಹನ ಮೂಷಿಕ
ವರವ ನೀ ನೀಡೊ ಎ ದೇವ ಬೆನಕ “ಬಾರೋ”
ನೀನಿರುವೆಯ ದೇವ ನೀನಿರುವೆಯ ದೇವ
ನೀನಿರುವೆಯ ನಮ್ಮ ಜೀವ
ನೀನಿರುವೆಯಾ ದೇವಾ “ಪ”

ಮಾನವತೆ ಇಲ್ಲದ ಮನೆಯೊಳಗೆ
ಮಾ -ಮೌನ ವಿಲ್ಲದ ಮನೆಯೊಳಗೆ
ನೀನಿರುವೆಯಾ ದೇವ ನೀನಿರುವೆಯಾ “ನೀ”

ಆಡಂಬರ ತುಂಬಿದ ಹುಂಬರ
ನೀ ಕಾಯುವೆಯಾ ಏ ಶಂಕರ
ನೀ ಅಭಯಂಕರ ಗಂಗಾಧರ “ನೀ”

ಭೇದ ಬಾವ ವಿರುವ ವಿನೊದ
ತುಂಬಿ ನಲಿವ ಜಗದ ಜನದ
ಮನೆ ಮನದಿ ದೇವನೀನಿರುವೆಯಾ “ನೀ”

ನೋಟ ಕುಣಿಸಿ ಆಟ ಮಣಿಸಿ
ಕಾಟ ನೀಡುವ ಜನಕೆ ನಿನ್ನ
ದರುಶನವ ಕೊಡುವೆಯಾ ತಂದೆ “ನೀ”

                 – ಕೃಷ್ಣಮೂರ್ತಿ ಅಜ್ಜಹಳ್ಳಿ, ಬೆಂ -೧೯

1 Comment

Filed under ಕವನಗಳು

ಭಾವಗೀತೆ..

ca2r67e5.jpg 

ಬೆಟ್ಟಕ್ಯಾಕೆ ಹತ್ತಿ ಬಂದೆ ಬಾಲೆ ನಿನ್ನ ಪುಟ್ಟದೆಷ್ಟು ನೋಯುತ್ತವೆ ಕಾಲೆ
ಹರಿಯುತ್ತವೆ ಝರಿ ನಾಲೆ
ಪಾಚಿ ಜಾರಿ ಬೀಳುತೀಯ ಲೊಲೇ
ನೀನು ಬೆಟ್ಟಕ್ಯಾಕೆ ಹತ್ತಿಬಂದೆ ಬಾಲೆ”ಪ”

ಬೆಟ್ಟದ್ ಜಾಜಿ ಹುಡುಕಿ ಬಂದೆ ನಾನು
ಗಟ್ಟಿ ದೈರ್ಯ ಮಾಡಿ ಕೊಂಡು ಇನ್ನು
ಕಟ್ಟುಮಸ್ತಿನ ಹುಡುಗ ನಿನ್ನ
ಮುಟ್ಟಿಬಿಡಲು ಬಂದೆ ಬೆಟ್ಟದ್ಯಾವರನ್ನ “ಬೆಟ್ಟ”

ಬೆಟ್ಟದ್ಯಾವರೆಂದ್ರೆ ಯಾರು ಹೇಳು
ಗುಟ್ಟು ರಟ್ಟಮಾಡಿ ನೀನು ಹೇಳು
ನೆಟ್ಟ ಕಣ್ಣಿನಿಂದ ಏಕೆ ನೊಡುವೆ ಹೇಳು
ಪಟ್ಟೆಸೀರೆ ಹುಟ್ತ ಹುಡುಗಿ ನೀನು ಹೇಳು “ಬೆಟ್ಟ”

ಜುಟ ಬಿಡು ಪುಟ್ಟ ನೀನು
ನೆಟ್ಟು ಇರುವೆ ಮನದಾಗೆ ನಿನ್ನ ನಾನು
ಒಂಟಿ ಇರುವೆ ಎಂದು ಬಂದೆ ಇಲ್ಲಿಗ್ ನಾನು
ಅಂಟಿಕೊಳುವ ಬಾರೋ ನೀನು ನಾನು  “ಬೆಟ್ಟ”

ದೂರ ದೂರ ಇರು ನಾರಿ ನೀನು
ಬಾರಿ ಬಾರಿ ಬಾರಿ ಕಷ್ಟ
ಸರಿ ದೂರ ನನಗಿಲ್ಲ ನಿನ್ನಲ್ಲಿ ಇಷ್ಟ “ಬೆಟ್ಟ”

ಬಿಡಬೇಡ ಬಿಡಬೇಡ ನನ್ನ ಕೈಯ ಬಿಡಬೇಡ
ಹಿಡಿದೇನು ನಿನ್ನ ಪಾದ ಬಿಡಬೇಡ ನನ್ನ
ಹಡದು ಕೊಟ್ಟೇನು ನಿನ್ನ ಕೂಸ ತಡಿಬೇಡ”ಬೆಟ್ಟ”

                 – ಕೃಷ್ಣಮೂರ್ತಿ ಅಜ್ಜಹಳ್ಳಿ, ಬೆಂ -೧೯

Leave a Comment

Filed under ಕವನಗಳು

ಕರುಣೆ ಇರದ ದೇವರಿಗೆ..

img_4940.jpg

ಯಾರೋ ತಂದೆ ಯಾರೋ ತಾಯಿ ನನ್ನ ಪಾಲಿಗೆ
ಬಾಳ ತುಂಬ ಬವಣೆ ಏಕೆ ನನ್ನ ಬಾಳಿಗೆ
ಯಾವ ತಪ್ಪಿಗೆ ಇಂತಶಿಕ್ಷೆ ತಂದಿರುವೆ ಎನಗೆ

ಹಗಲು ರಾತ್ರಿ ಕಳೆವುದೇಗೆ
ಗಾಳಿಮಳೆಯ ಸಹಿಸಲೇಗೆ
ಅಲೆಯುತಿರುವೆ ದಾರಿ ಕಾಣದೆ “ಯಾರೋ”

ತಿನ್ನೋ ಅನ್ನ ಚಿನ್ನವಾಗಿ
ಕಣ್ಣನೀರು ನೆತ್ತರಾಗಿ ಕರೆಯುತಿರುವೆ
ಬರುವೆಯಾ ನನ್ನ ನೀನು ಮರೆತೆಯ “ಯಾರೋ”

ಬಾಳ ತುಂಬ ಬವಣೆ ತುಂಬಿ
ನಾನು  ನೊಂದಿಹೆ ಬಾಳಲಾರೆ
ಬದುಕಲಾರೆ ನೀನು ಬಾರದೆ ದಾರಿ ತೋರದೆ “ಯಾರೋ”

ಹರಿದ ಬಟ್ಟೆ ಮುರಿದ ತಟ್ಟೆ
ಬದುಕು ಎಂಬುದಿಷ್ಟೆ
ಎಲ್ಲ ಲೊಳಲೊಟ್ಟೆಯು  “ಯಾರೋ”

                 – ಕೃಷ್ಣಮೂರ್ತಿ ಅಜ್ಜಹಳ್ಳಿ, ಬೆಂ -೧೯

Leave a Comment

Filed under ಕವನಗಳು

ಪ್ರೀತಿಸಿದ ಹುಡುಗಿ..

ಶ್ಲೋಕ


ಪೀತಿಸಿದ ಹುಡುಗಿ ಕೈಕೊಟ್ಟು ಓಡಿದಳು
ನಂಬಿದ ನನಗೆ ಮೋಸವನು ಮಾಡಿದಳು
||ನಂಬದಿರಿ ನೀವ್ಯಾರು ಮೋಸದ ಹುಡುಗಿಯರನು||

ನಂಬಿದ್ದೆ ನಾನೊಂದು ಹೆಣ್ಣ
ನಂಬ್ಯಾಡಿ ನೀವ್ಯಾರು ಹೆಣ್ಣ ಅಣ್ಣ
ಸುರಿದಾರು ನಿಮಗೆ ಬಿಸಿ ಬಿಸಿ ಸುಣ್ಣ  ||ಪ||

ಬಣ್ಣದ ಮಾತಾಡಿ ಕಣೊಡೆದಳಣ್ಣ
ಕಣ್ಣಲ್ಲಿ ನಾ ಅವಳ ತುಂಬಿಕೊಂಡೆನಣ್ಣ
ಕನಸು ಮನಸಲ್ಲಿಅವಳಿದ್ದಳಣ್ಣ ||ನಂಬಿದ್ದೆ||

ಏಳ್ದಂಗೆ ಕೇಳ್ತಿದ್ದೆ ಅವಳ ಮಾತ ಅಣ್ಣ
ನೀನಿಲ್ದೆ ನಾನಿಲ್ಲ ಅಂತಿದ್ದಳಣ್ಣ
ನನ್ನ ಮರೆತು ಬಿಡು ಅಂತೇಳಿ ಹೊಂಟೊದಳಣ್ಣ ||ನಂಬಿದ್ದೆ||

ನಗು ನಗುತ ಮಾತಾಡುತಿದ್ಲು ಎಲ್ಲರತ್ರ ಅವಳು
ನಗುವಿನ ನೆನಪೊಂದ ಬಿಟ್ಟೊದಳವಳು
ನಂಬಿಸಿ ನನಗವಳು ಮೊಸವ ಮಾಡಿದಳು ||ನಂಬಿದ್ದೆ||

ತುಪ್ಪದಂತ ಮಾತಾಡಿ ತೆಪ್ಪಗಾದಳಣ್ಣ
ಕಪ್ಪಗಿದ್ರು ಕೊಟ್ಟಿದ್ದೆ ನನ್ಮನಸನ್ನ
ಕೊನೆಗವಳು ಕೊಟ್ಟೊದ್ಲು ಬರಿ ಕನಸನ್ನ ||ನಂಬಿದ್ದೆ||

ಅವಳ ಮಾತ ನಾ ಕೇಳಿ ಮನೆ ಮಂದಿ ಬಿಟ್ಟೆ
ಅವಳ ಪ್ರೀತಿ ಮಾತಿಗೆ ಹುಚ್ಚನಾಗಿ ಬಿಟ್ಟೆ
ಅವಳ್ ಕೈಕೊಟ್ಟು ಹೊದಾಗಿಂದ ಕುಡಿಯೋದ್ ಕಲ್ತು ಬಿಟ್ಟೆ ||ನಂಬಿದ್ದೆ||

ನಿನ್ನ ಬಿಟ್ಟು ಬದುಕಲ್ಲ ಅಂತಿದ್ದಳಣ್ಣ
ವಿಷಕುಡ್ದು ಹೊದ್ದಾಡತಿದ್ರು ಅವಳ್
ನನ್ನ ತಿರುಗಿ ನೋಡಲಿಲ್ಲವಣ್ಣ ||ನಂಬಿದ್ದೆ||

               -  ಕೃಷ್ಣಮೂರ್ತಿ ಅಜ್ಜಹಳ್ಳಿ, ಬೆಂಗಳೂರು -೧೯

2 Comments

Filed under ಕವನಗಳು

kuvempu2.jpg
ಕನ್ನಡ ಡಿಂಡಿಮ

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

-ಕುವೆಂಪು

5 Comments

Filed under ನಿನಗಾಗಿ.., ಸಾಹಿತ್ಯ/ಕಥೆ/ಕಾದಂಬರಿ

Elle iru..Enthaadaru iru..endendigu ni kannadavaagiru…

putt.jpg

Kannadave Sathya

Kannadave Nithya

3 Comments

Filed under ನಿನಗಾಗಿ..